ಅಭಿಪ್ರಾಯ / ಸಲಹೆಗಳು

ಅಗಸರು ಹಾಗೂ ಕ್ಷೌರಿಕರಿಗೆ ಒಂದು ಬಾರಿ ರೂ 5000ಗಳ ನೆರವು

ಸನ್ಮಾನ್ಯ ಮುಖ್ಯ ಮಂತ್ರಿಯವರಿಂದ ದಿನಾಂಕ:06-05-2020ರಂದು, ಕೋವಿಡ್-19ರ ತಡೆಗೆ ಲಾಕ್‍ಡೌನ್ ಜಾರಿಗೊಳಿಸಿರುವ ಪರಿಣಾಮವಾಗಿ ಕಾರ್ಮಿಕರಿಗೆ ಆರ್ಥಿಕವಾಗಿ ನಷ್ಟವಾಗಿರುವುದನ್ನು ಗಮನಿಸಿ, ಸರ್ಕಾರದ ವತಿಯಿಂದ ಹಲವು ವರ್ಗದವರಿಗೆ ಪರಿಹಾರ ಧನವನ್ನು ಘೋಷಿಸಲಾಗಿದೆ. ಅದರಲ್ಲಿ  ಅಗಸರು ಹಾಗೂ ಕ್ಷೌರಿಕ  ವೃತ್ತಿಯಲ್ಲಿ ತೊಡಗಿರುವ  ಅಸಂಘಟಿತ ಕಾರ್ಮಿಕರಿಗೆ  ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿಯ ಮೂಲಕ ಒಂದು ಬಾರಿ ಪರಿಹಾರವಾಗಿ ರೂ.5,000/-ಗಳ  ನೆರವನ್ನು ನೀಡಲಾಗುವುದು.

ಸದರಿ ವೃತ್ತಿಯಲ್ಲಿ ತೊಡಗಿರುವ ಅರ್ಹ ಫಲಾನುಭವಿಗಳು  https://sevasindhu.karnataka.gov.in/   ಪೋರ್ಟಲ್‍ನಲ್ಲಿ ಅರ್ಜಿ ಸಲ್ಲಿಸಬೇಕಾಗಿದ್ದು, ಸರ್ಕಾರವು ಅವುಗಳನ್ನು ಪರಿಶೀಲಿಸಿ ಫಲಾನುಭವಿಗಳ ಆಧಾರ್ ಸಂಖ್ಯೆಗೆ ಲಿಂಕ್ ಆಗಿರುವ ಬ್ಯಾಂಕ್ ಖಾತೆಗೆ ಡಿ.ಬಿ.ಟಿ ಮೂಲಕ ತಲಾ ರೂ.5000/-ಗಳ ಪರಿಹಾರವನ್ನು ವರ್ಗಾಯಿಸುತ್ತದೆ.

ಷರತ್ತುಗಳು:

 1. ವಯೋಮಿತಿ: 18 ರಿಂದ 65 ವರ್ಷಗಳು
 2. ಕುಟುಂಬದಲ್ಲಿ ಒಬ್ಬರಿಗೆ ಮಾತ್ರ.
 3. ಕರ್ನಾಟಕದಲ್ಲಿ ಅಗಸ ಹಾಗೂ ಕ್ಷೌರಿಕ ವೃತ್ತಿಯಲ್ಲಿ ತೊಡಗಿರುವ ವಲಸೆ ಕಾರ್ಮಿಕರು ಸಹ ಅರ್ಹರು. (ಕರ್ನಾಟಕ ರಾಜ್ಯದ ಬಿ.ಪಿ.ಎಲ್ ಕಾರ್ಡ್ ಹೊಂದಿದ್ದಲ್ಲಿ).
 4. ಬಿಪಿಎಲ್ ಕಾರ್ಡ್ ಹೊಂದಿದವರಿಗೆ ಮಾತ್ರ
 5. ಆಧಾರ್ ಸಂಖ್ಯೆ ಲಿಂಕ್ ಆಗಿರುವ ಬ್ಯಾಂಕ್ ಖಾತೆ ಹೊಂದಿರುವುದು ಕಡ್ಡಾಯ..
 6. ಅರ್ಜಿದಾರರು ವ್ಯಾಲಿಡ್ ಮೊಬೈಲ್ ಸಂಖ್ಯೆಯನ್ನು ಹೊಂದಿರತಕ್ಕದ್ದು.

 

ಪೂರಕ ದಾಖಲೆಗಳು:

 1. ಅಗಸ/ಕ್ಷೌರಿಕ ವೃತ್ತಿ ನಿರ್ವಹಿಸುತ್ತಿರುವ ಕುರಿತು ನಿಗದಿತ ನಮೂನೆಯಲ್ಲಿ ಅಧಿಕಾರಿಗಳಿಂದ ಪಡೆದ ಉದ್ಯೋಗ ದೃಢೀಕರಣ ಪ್ರಮಾಣ ಪತ್ರ.
 2. ನಿಗದಿತ ನಮೂನೆಯಲ್ಲಿ ಸ್ವಯಂ ಘೋಷಣೆ.
 3. ಬಿ.ಪಿ.ಎಲ್ ಕಾರ್ಡ್
 4. ಆಧಾರ್ ಕಾರ್ಡ್
 5. ಜನ್ಮ ದಿನಾಂಕ ದಾಖಲೆ.
 6. ಪಾಸ್‍ಪೋರ್ಟ್ ಅಳತೆಯ ಇತ್ತೀಚಿನ ಭಾವಚಿತ್ರ.

ಸೇವಾ ಸಿಂಧು ಪೊರ್ಟ್‍ಲ್‍ನಲ್ಲಿ ಅರ್ಜಿಯ ಸಂಸ್ಕರಣೆಯ ವಿಧಾನ

 1. ಅರ್ಜಿದಾರರು ಅರ್ಜಿಯನ್ನು ಸೇವಾ ಸಿಂಧು ಪೋರ್ಟ್‍ಲ್ ಮೂಲಕ ಮೇಲ್ಕಂಡ ದಾಖಲೆಗಳೊಂದಿಗೆ ಸಲ್ಲಿಸುವುದು.
 2. ಅರ್ಜಿ ಸಲ್ಲಿಸಿದ ಪ್ರತಿ ಅರ್ಜಿದಾರರಿಗೆ ಅರ್ಜಿ ಸ್ವೀಕೃತಿಯ ಕುರಿತು ವಿಶಿಷ್ಠ ಗುರುತಿನ ಸಂಖ್ಯೆಯನ್ನು ಅರ್ಜಿದಾರರ ಮೊಬೈಲ್ ಸಂಖ್ಯೆಗೆ ಸಂದೇಶ ರವಾನಿಸಲಾಗುವುದು.
 3. ನೋಂದಾಯಿತ ಅರ್ಜಿದಾರರು ಅರ್ಜಿ ಸ್ವೀಕೃತಿಯ ಸಮಯದಲ್ಲಿ ಪಡೆದ ವಿಶಿಷ್ಠ ಗುರುತಿನ ಸಂಖ್ಯೆಯನ್ನು ಬಳಸಿ ಸಲ್ಲಿಸಿದ ಅರ್ಜಿಯ ಸ್ಥಿತಿಯ ಕುರಿತು ಮಾಹಿತಿ ಪಡೆಯಬಹುದು.
 4. ಸಲ್ಲಿಸಿದ ಅರ್ಜಿಯನ್ನು ಸಂಬಂಧಪಟ್ಟ ಅಧಿಕಾರಿಗಳಿಗೆ ಮುಂದಿನ ಕ್ರಮಕ್ಕಾಗಿ/ಪರಿಶೀಲನೆಗಾಗಿ ಕಳುಹಿಸಲಾಗುವುದು.
 5. ಸೂಕ್ತ ಪರಿಶೀಲನೆಯ ನಂತರ, ಅರ್ಹ ಫಲಾನುಭವಿಗಳ ಆಧಾರ್ ಜೋಡಣೆಯ ಬ್ಯಾಂಕ್ ಖಾತೆಗೆ ಪರಿಹಾರದ ಮೊತ್ತವನ್ನುತ ಡಿ.ಬಿ.ಟಿ. ಮೂಲಕ ನೇರ ವರ್ಗಾವಣೆ ಮಾಡಲಾಗುವುದು.

ನಿಗದಿತ ನಮೂನೆಗಳು:

ಕ್ರ.ಸಂ.

ವಿವರ

ಭಾಷೆ

ಗಾತ್ರ

ಡೌನ್ಲೋಡ್

01

ಉದ್ಯೋಗ ದೃಢೀಕರಣ ಪತ್ರ

ಕನ್ನಡ

592.ಕೆ.ಬಿ

ವೀಕ್ಷಿಸಿ

02

ಸ್ವಯಂ ಘೋಷಣೆ

ಕನ್ನಡ

89 ಕೆ.ಬಿ

ವೀಕ್ಷಿಸಿ

03

ನೆರವು ಪಡೆದ ಫಲಾನುಭವಿಗಳ ವಿವರ

ಇಂಗ್ಲೀಷ್‌

-

ವೀಕ್ಷಿಸಿ

ಇತ್ತೀಚಿನ ನವೀಕರಣ​ : 12-04-2022 02:44 PM ಅನುಮೋದಕರು: Adminಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080