ಅಭಿಪ್ರಾಯ / ಸಲಹೆಗಳು

ನೇಮಕಾತಿ ಸೇವೆಗಳು

ನೇಮಕಾತಿ ಸೇವೆಗಳು:-

 a)ದಾಖಲೆಗಳ ದೃಢೀಕರಣ:

          ಗಮ್ಯಸ್ಥಾನದ ದೇಶ/ವಿದೇಶಿ ಉದ್ಯೋಗದಾತರ ಅವ್ಯಕತೆಗೆ ಅನುಗುಣವಾಗಿ ಶೈಕ್ಷಣಿಕ ಮತ್ತು ನಿರ್ದಿಷ್ಟ- ಕೌಶಲ್ಯ ಪ್ರಮಾಣಪತ್ರಗಳ ದೃಢೀಕರಣವನ್ನು                ಮಾಡಲು ವ್ಯವಸ್ಥೆ ಮಾಡಿಕೊಡುತ್ತದೆ. ಹೆಚ್ಚಿನ ವಿವರಗಳಿಗಾಗಿ ದಯವಿಟ್ಟು ಹತ್ತಿರದ ಕಾರ್ಮಿಕ ಇಲಾಖಾ ಕಛೇರಿ ಅಥವಾ ವಲಸೆ ಮಾಹಿತಿ ಕೇಂದ್ರಕ್ಕೆ                (MIC) ಭೇಟಿ ನೀಡಿ.

 b)ನಿರ್ಗಮನ ಪೂರ್ವ ದೃಷ್ಟಿಕೋನ ತರಬೇತಿ (PDOT):

        1.ಬೆಂಗಳೂರಿನಲ್ಲಿರುವ IMCK PDOT ಕೇಂದ್ರವು, ವಲಸೆ ಕಾಯ್ದೆ 1983ಡಿಯಲ್ಲಿ ಉಅಅ ದೇಶಗಳು ಸೇರಿದಂತೆ 18 ಅಧಿಸೂಚಿತ ದೇಶಗಳಿಗೆ ನಿರ್ಗಮಿಸುವ              ವಲಸಿಗರಿಗೆ ಗುಣಮಟ್ಟದ Pಆಔ ಒದಗಿಸಲು,ವಿದೇಶಾಂಗ ವ್ಯವಹಾರಗಳ ಸಚಿವಾಲಯದಿಂದ (MEA) ಗುರುತಿಸಲ್ಪಟ್ಟ, ಭಾರತದ 28 PDOT                          ಕೇಂದ್ರಗಳಲ್ಲಿ ಒಂದಾಗಿರುತ್ತದೆ.

        2.ವಿದೇಶಾಂಗ ವ್ಯವಹಾರಗಳ ಸಚಿವಾಲಯ (MEA) ದಿಂದ ಪ್ರಮಾಣೀಕರಿಸಲ್ಪಟ್ಟ IMCK ಯು PDOT ನಡೆಸಲು ಪ್ರಸ್ತುತ 11 ಮಾಸ್ಟರ್ ಟ್ರೈನರ್‍ಗಳನ್ನು                 ಹೊಂದಿದ್ದು, IMCK PDOT ಕೇಂದ್ರವು  ಬೆಂಗಳೂರಿನಲ್ಲಿರುತ್ತದೆ.

        3.ಅಭ್ಯರ್ಥಿಗಳು ರಾಜ್ಯ ಸರ್ಕಾರದ ನೇಮಕಾತಿ ಏಜೆನ್ಸಿ (RA) ಯ ಮೂಲಕ ನೇಮಕಗೊಳ್ಳದಿದ್ದರು ಸಹಾ ನಿರ್ಗಮನದ ಮೊದಲು PDO ಗಾಗಿ ಸ್ಲಾಟ್‍ನ್ನು                ಕಾಯ್ದಿರಿಸಲು, ಸ್ಲಾಟ್‍ನ್ನು ಕಾಯ್ದಿರಿಸುವ ವಿನಂತಿಯೊಂದಿಗೆ ನಿಮ್ಮ ನೇಮಕಾತಿ ಏಜೆನ್ಸಿ(RA)ಯೊಂದಿಗೆ ಮಾತನಾಡುವ ಮೂಲಕ ದಯವಿಟ್ಟು ಸರ್ಕಾರಿ            ನೇಮಕಾತಿ ಏಜೆನ್ಸಿಯನ್ನು ಸಂರ್ಪಕಿಸಿ.

 ಸೇವಾ ಶುಲ್ಕ

ಸಂಭಾವ್ಯ ವಲಸಿಗರಿಗೆ ನೇಮಕಾತಿ ಸೇವೆಗಳನ್ನು ಒದಗಿಸಲು ತಲಾ ರೂ.30000/-ಗಳ ಸೇವಾ ಶುಲ್ಕ ಹಾಗೂ ನಿಯಮಾನುಸಾರ  ಅನ್ವಯಿಸುವ ಹೆಚ್ಚುವರಿ GST ವಿಧಿಸಲಾಗುವುದು. ಸೇವಾ ಶುಲ್ಕವು, ವಿದೇಶಾಂಗ ವ್ಯವಹಾರ ಸಚಿವಾಲಯ (MEA), ಭಾರತ ಸರ್ಕಾರ (GoI)ದ  ಮೆಮೊರ್ಯಾಂಡಮ್ ಸಂಖ್ಯೆ:z-11025/279/2009- Emig, ದಿನಾಂಕ:15-12-2017 ರನ್ವಯ ಇರುತ್ತದೆ

ಟಿಪ್ಪಣಿ:-

              ಅಭ್ಯರ್ಥಿಯು ಉದ್ಯೋಗ ಒಪ್ಪಂದವನ್ನು ಒಪ್ಪಿಕೊಂಡ ನಂತರವೇ, ಸೇವಾ ಶುಲ್ಕವನ್ನು ಪಾವತಿಸಬೇಕಾಗಿರುತ್ತದೆ.

ಸೇವಾ ಶುಲ್ಕಗಳು ಈ ಕೆಳಗಿನವುಗಳನ್ನು ಒಳಗೊಂಡಿದ್ದು, ಅವುಗಳೆಂದರೆ:-

 • 1.ದೇಶದ ವಿವಿಧ ಭಾಗಗಳಿಂದ ನುರಿತ ಅಥವಾ ತರಬೇತಿ ಪಡೆದ ಅಭ್ಯರ್ಥಿಗಳ ಸ್ಕೌಟಿಂಗ್ ಹಾಗೂ ಆಯ್ಕೆಮಾಡುವ ವೆಚ್ಚ:
 • 2.ಜಾಹೀರಾತುಗಳ ವೆಚ್ಚ
 • 3.ಅನ್ವಯಿಸುವ ವಿವಿದ ಕೌಶಲ್ಯ ಪರೀಕ್ಷಾ ಶುಲ್ಕ.
 • 4.ಪ್ರಮಾಣ ಪತ್ರಗಳಿಗೆ ದೃಢೀಕರಣ ಶುಲ್ಕಗಳು,
 • 5.ನೇಮಕಾತಿ ಏಜೆಂಟ್ ಮೂಲಕ ಸಂದರ್ಶನಗಳನ್ನು ನಡೆಸಲು ದೇಶೀಯ ಪ್ರಯಾಣ ಅಥವಾ ವಸತಿ ಮತ್ತು ಬೋರ್ಡಿಂಗ್ ವೆಚ್ಚ.
 • 6.ಬ್ಯಾಂಕ್ ಗ್ಯಾರಂಟಿಯ ಮರುಕಳಿಸುವ ವಾರ್ಷಿಕ ವೆಚ್ಚ ಅನ್ವಯಿಸುವಲ್ಲಿ ಮಾತ್ರ.
 • 7.ಅಭ್ಯರ್ಥಿಗಳು ಪ್ರಯಾಣಿಸಲು ನಿರಾಕರಿಸಿದ್ದಲ್ಲಿ ಮತ್ತು ಅವಧಿ ಪೂರ್ವ ವಾಪಾಸಾತಿಯನ್ನು ಬಯಸಿದಾಗ, ನೇಮಕಾತಿ ಏಜೆಂಟ್‍ಗಳ ಮೇಲೆ ವಿದೇಶೀ ಉದ್ಯೋಗದಾತರು ವಿಧಿಸುವ ರದ್ದತಿ ಶುಲ್ಕಗಳು.
 • 8.ವಲಸಿಗರ ನೇಮಕಾತಿಯ ಪ್ರಕ್ರಿಯೆಗಾಗಿ ಮುಖ್ಯ ಕಛೇರಿ ಮತ್ತು ಶಾಖಾ ಕಛೇರಿಗಳನ್ನು ನಡೆಸುವ ಆಡಳಿತಾತ್ಮಕ ವೆಚ್ಚ.

ಸೇವಾ ಶುಲ್ಕಗಳು ಈ ಕೆಳಗಿನವುಗಳನ್ನು ಒಳಗೊಂಡಿರುವುದಿಲ್ಲ, ಅವುಗಳೆಂದರೆ:

 • 1.ವಿದೇಶಿ ಮಿಷನ್‍ಗಳು ಅಥವಾ ಭಾರತದಲ್ಲಿನ ಧೂತವಾಸಗಳು ವಿಧಿಸುವ ರಾಯಭಾರ ಅಥವಾ ಕಾನ್ಸುಲರ್ ವೀಸಾ ಶುಲ್ಕಗಳು.
 • 2.ಉದ್ಯೋಗ ಪೂರ್ವ ವೈದ್ಯಕೀಯ ತಪಾಸಣೆ ವೆಚ್ಚ.
 • 3.ಗಮ್ಯಸ್ಥಾನದ ದೇಶಕ್ಕೆ ವಿಮಾನ ಟಿಕೆಟ್ ವೆಚ್ಚ.
 • 4.ನಿಯೋಜನೆಯ ಮೊದಲು ವಲಸಿಗರ ಬೋರ್ಡಿಂಗ್ ಮತ್ತು ವಸತಿ ಶುಲ್ಕಗಳು ಯಾವುದಾದರೂ ಇದ್ದಲ್ಲಿ:
 • 5.ಅನ್ವಯವಾಗುವ ಸರಕು ಸೇವಾ ತೆರಿಗೆ (ಜಿಎಸ್‍ಟಿ).

        ಸೇವಾ ಶುಲ್ಕಗಳ ಪಾವತಿಯನ್ನು (ಎ) ಚೆಕ್ (ಬಿ) ನೆಟ್ ಬ್ಯಾಂಕಿಂಗ್ ವರ್ಗಾವಣೆ/ಭೀಮ್ ಆಪ್/ಯುಪಿಐ/NEFT/RTGS, (ಸಿ) ಡೆಬಿಟ್ ಕಾರ್ಡ್ ಮತ್ತು (ಡಿ)          ಬ್ಯಾಂಕ್ ಖಾತೆಯಲ್ಲಿ ಠೇವಣಿ ಮಾಡಬಹುದು.

              ಗಮನಿಸಿ: ನಗದು ರೂಪದಲ್ಲಿ ಪಾವತಿಯನ್ನು ಸ್ವೀಕರಿಸಲಾಗುವುದಿಲ್ಲ.

ಇತ್ತೀಚಿನ ನವೀಕರಣ​ : 10-11-2022 04:37 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080