ಅಭಿಪ್ರಾಯ / ಸಲಹೆಗಳು

ಕಡ್ಡಾಯ ಅವಶ್ಯಕತೆಗಳು

ಕಡ್ಡಾಯ ಅವಶ್ಯಕತೆಗಳು:

ವೈದ್ಯಕೀಯ ಅವಶ್ಯಕತೆಗಳು:

  • ನೇಮಕಗೊಂಡ ಅಭ್ಯರ್ಥಿಯು ತಜ್ಞರಿಂದ ವೈದ್ಯಕೀಯ ಪರೀಕ್ಷೆಗಳಲ್ಲಿ ಉತ್ತೀರ್ಣರಾಗುವುದು ಕಡ್ಡಾಯವಾಗಿರುತ್ತದೆ.
  • ಗಲ್ಫ್ ಸಹಕಾರ ಮಂಡಳಿ (GCC) ದೇಶಗಳಿಗೆ ವೀಸಾ ಪಡೆಯುವ ಮೊದಲು, ಗಲ್ಫ್ ಹೆಲ್ತ್ ಕೌನ್ಸಿಲ್ (GHC)  ನೊಂದಿಗೆ ಮಾನ್ಯತೆ ಪಡೆದ ಭಾರತದ ಆರೋಗ್ಯ ತಪಾಸಣೆ ಕೇಂದ್ರಗಳಲ್ಲಿ ವೈದ್ಯಕೀಯ ಪರೀಕ್ಷಾ ವರದಿ ಪಡೆಯುವುದು.
  • ಆರೋಗ್ಯ ತಪಾಸಣೆಯು ವೈದ್ಯಕೀಯ ಇತಿಹಾಸ, ಕ್ಲಿನಿಕಲ್ ಪರೀಕ್ಷೆ ಪ್ರಯೋಗಾಲಯದ ವಿಶ್ಲೇಷಣೆ ಮತ್ತು ಮನೋವೈದ್ಯಕೀಯ ಪರೀಕ್ಷೆಗಳನ್ನು ಒಳಗೊಂಡಿರುತ್ತದೆ ಮಾನ್ಯತೆ ಪಡೆದ ಕೇಂದ್ರದಿಂದ ನೀಡಲಾದ ವೈದ್ಯಕೀಯ ಪ್ರಮಾಣ ಪತ್ರವನ್ನು ವೀಸಾ ನೀಡುವ ಅಥವಾ ಅನುಮೋದಿಸುವ ಉದ್ದೇಶಕ್ಕೆ ಬಳಸಲಾಗುತ್ತದೆ.
  • ವೈದ್ಯಕೀಯ ಪರೀಕ್ಷೆಗಾಗಿ ನೋಂದಾಯಿಸಲು ಮತ್ತು ವೈದ್ಯಕೀಯ ಸ್ಥಿತಿಯನ್ನು ಪರಿಶೀಲಿಸಲು gcchmc.org ಭೇಟಿ ನೀಡಿ.

ಗಮನಿಸಿ:  ಗಮ್ಯಸ್ಥಾನದ ದೇಶದಿಂದ ಪಟ್ಟಿ ಮಾಡಲಾದ ಕಾಯಿಲೆಗಳ/ರೋಗಗಳಿಗೆ ನಿಮ್ಮ ಪರೀಕ್ಷೆಗಳು ಋಣಾತ್ಮಕವಾಗಿದ್ದರೇ ನೀವು ಮಾನ್ಯವಾದ ವೀಸಾವನ್ನು ಹೊಂದಿದ್ದರೂ ಸಹ ಪ್ರಯಾಣಿಸಲು ನಿಮಗೆ ಅನುಮತಿಸಲಾಗುವುದಿಲ್ಲ. ಗಮ್ಯಸ್ಥಾನದ ದೇಶವು ಸೂಚಿಸಿದಂತೆ ವೈದ್ಯಕೀಯ ಪರೀಕ್ಷೆಯ ನೋಂದಣಿ ಕುರಿತು RA-K ಅಭ್ಯರ್ಥಿಗೆ ಮಾಹಿತಿ ನೀಡುತ್ತದೆ ಮತ್ತು ಸಹಾಯ ಮಾಡುತ್ತದೆ.

ವಿಮೆ:-

  • RA-K ಯಿಂದ ನೇಮಕಗೊಂಡ ಎಲ್ಲಾ ಅಭ್ಯರ್ಥಿಗಳು ತಮ್ಮ ವಿದೇಶ ಪ್ರಯಾಣದ ಮೊದಲು ವಿಮೆಯನ್ನು ಹೊಂದಿರುವುದು ಕಡ್ಡಾಯವಾಗಿರುತ್ತದೆ ವಿಮಾ ಪಾಲಿಸಿಯ ಸ್ವರೂಪವು ಗಮ್ಯಸ್ಥಾನದ ದೇಶ ಮತ್ತು ವಿದೇಶಿ ಉದ್ಯೋಗದಾತರ ಮೇಲೆ ಅವಲಂಬಿತವಾಗಿರುತ್ತದೆ.
  • ವಲಸೆ ಕಾಯ್ದೆ 1983ರ ಅಡಿಯಲ್ಲಿ 18 ಅಧಿಸೂಚಿತ ದೇಶಗಳಿಗೆ ಪ್ರಯಾಣಿಸುವ ದಾದಿಯರು ಸೇರಿದಂತೆ ECR ಪಾಸ್‍ಪೋರ್ಟ್‍ಗಳನ್ನು ಹೊಂದಿರುವ ಎಲ್ಲಾ ಅಭ್ಯರ್ಥಿಗಳು ನಿರ್ಗಮಿಸುವ ಮೊದಲು ಕಡ್ಡಾಯವಾಗಿ ಪ್ರವಾಸಿ ಭಾರತೀಯ ಭೀಮಾ ಯೋಜನೆಗೆ (PBBY) ಅರ್ಜಿ ಸಲ್ಲಿಸಬೇಕು.
  • ವಲಸೆ ಕಾಯ್ದೆ, 1983ರ ಅಡಿಯಲ್ಲಿ 18 ಅಧಿಸೂಚಿತ ದೇಶಗಳನ್ನು ಹೊರತುಪಡಿಸಿ, ನೇಮಕಾತಿ ಏಜೆನ್ಸಿಯು ದೇಶ ಮತ್ತು ಔದ್ಯೋಗಿಕ ನಿರ್ದಿಷ್ಟ ವಿಮಾ ಮಾರ್ಗಸೂಚಿಗಳ ಕುರಿತು ಮಾರ್ಗದರ್ಶನ ನೀಡುತ್ತದೆ.

ಇತ್ತೀಚಿನ ನವೀಕರಣ​ : 08-11-2022 03:42 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080