ಅಭಿಪ್ರಾಯ / ಸಲಹೆಗಳು

ವ್ಯಾಪಾರಿಗಳು ಹಾಗೂ ಸ್ವಯಂ ಉದ್ಯೋಗಿಗಳಿಗೆ ರಾಷ್ಟ್ರೀಯ ಪಿಂಚಣಿ(ಎನ್ ಪಿ ಎಸ್-ಟ್ರೇಡರ್ಸ್) ಯೋಜನೆ

ವ್ಯಾಪಾರಿಗಳು ಹಾಗೂ ಸ್ವಯಂ ಉದ್ಯೋಗಿಗಳಿಗೆ ರಾಷ್ಟ್ರೀಯ ಪಿಂಚಣಿ ‌ (ಎನ್ ಪಿ ಎಸ್-ಟ್ರೇಡರ್ಸ್)ಯೋಜನೆ

ವ್ಯಾಪಾರಿಗಳು/ಲಘು ವ್ಯಾಪಾರಿಗಳು ಹಾಗೂ ಸ್ವಯಂ ಉದ್ಯೋಗಿಗಳಿಗೆ 60 ವರ್ಷ ಪೂರ್ಣಗೊಂಡ ನಂತರ ಮಾಸಿಕ ನಿಶ್ಚಿತ ರೂ. 3,000/- ಗಳ ಪಿಂಚಣಿ ಸೌಲಭ್ಯ ಒದಗಿಸುವ ಮೂಲಕ ಆರ್ಥಿಕ ಭದ್ರತೆಯನ್ನು ನೀಡುವ “ವ್ಯಾಪಾರಿಗಳು ಹಾಗೂ ಸ್ವಯಂ ಉದ್ಯೋಗಿಗಳಿಗೆ ರಾಷ್ಟ್ರೀಯ ಪಿಂಚಣಿ ಯೋಜನೆ” ಎನ್ನುವ ವಂತಿಕೆ ಆಧಾರಿತ ಪಿಂಚಣಿ ಯೋಜನೆಯನ್ನು ಭಾರತ ಸರ್ಕಾರವು ಜಾರಿಗೆ ತಂದಿರುತ್ತದೆ.

  1. ಯೋಜನೆಯ ಫಲಾನುಭವಿಗಳು:

ಈ ಯೋಜನೆಯಡಿ ಅಂಗಡಿ ಮಾಲೀಕರು, ಚಿಲ್ಲರೆ ವ್ಯಾಪಾರಿಗಳು, ಅಕ್ಕಿ ಗಿರಣಿ ಮಾಲೀಕರು, ಎಣ್ಣೆ ಗಿರಣಿ ಮಾಲೀಕರು, ವರ್ಕ್‍ಶಾಪ್ ಮಾಲೀಕರು, ಕಮಿಷನ್ ಏಜೆಂಟ್ಸ್, ರಿಯಲ್ ಎಸ್ಟೇಟ್‍ನ ಬ್ರೋಕರ್ಸ್, ಸಣ್ಣ ಹೋಟೆಲ್ ಹಾಗೂ ರೆಸ್ಟೋರೆಂಟ್‍ನ ಮಾಲೀಕರು ಹಾಗೂ ಅಂತಹ ಇತರೆ ಸಣ್ಣ ವ್ಯಾಪಾರಗಳಲ್ಲಿ ತೊಡಗಿಸಿಕೊಂಡ ವ್ಯಾಪಾರಿಗಳು/ಲಘು ವ್ಯಾಪಾರಿಗಳು ಹಾಗೂ ಸ್ವಯಂ ಉದ್ಯೋಗಿಗಳು ಫಲಾನುಭವಿಗಳಾಗುತ್ತಾರೆ.

 

  1. ಯೋಜನೆಗೆ ಸೇರಲು ಅರ್ಹತೆಗಳು:
  • 18 ರಿಂದ 40 ವರ್ಷದವರಾಗಿರಬೇಕು.
  • ವಾರ್ಷಿಕ ವಹಿವಾಟು ಗರಿಷ್ಠ ರೂ. 1.50 ಕೋಟಿಗಳ ಒಳಗಿರಬೇಕು
  • ಆದಾಯ ತೆರಿಗೆ ಪಾವತಿಸುವವರಾಗಿರಬಾರದು.
  • ಇ.ಎಸ್.ಐ/ಇ.ಪಿ.ಎಫ್/ಎನ್.ಪಿ.ಎಸ್/ಪಿಎಂಎಸ್‍ವೈಎಂ/ಪಿ.ಎಂ.ಕೆ.ಎಂ.ವೈ. ಯೋಜನೆಯ ಫಲಾನುಭವಿಗಳಾಗಿರಬಾರದು.

 

  1. ಯೋಜನೆ ನೋಂದಣಿ ವಿಧಾನಗಳು:

ಅರ್ಹ ಫಲಾನುಭವಿಗಳು ಹತ್ತಿರದ “ಸಾಮಾನ್ಯ ಸೇವಾ ಕೇಂದ್ರ (ಸಿ.ಎಸ್.ಸಿ)” ಗಳಲ್ಲಿ ಯೋಜನೆಯಡಿ ನೋಂದಾಯಿಸಬಹುದಾಗಿರುತ್ತದೆ. ಸಿ.ಎಸ್.ಸಿ.ಗಳ ವಿವರಗಳನ್ನು ಹತ್ತಿರದ ಎಲ್.ಐ.ಸಿ. ಶಾಖೆಗಳು, ಕಾರ್ಮಿಕ ಇಲಾಖೆ, ಕೇಂದ್ರ ಸರ್ಕಾರದ ಕಾರ್ಮಿಕ ಇಲಾಖೆ, ಇ.ಎಸ್.ಐ. ಕಾರ್ಪೋರೇಷನ್, ಹಾಗೂ ಭವಿಷ್ಯನಿಧಿ ಇಲಾಖೆ ಹಾಗೂ ಅವರ ವೆಬ್ ವಿಳಾಸಗಳು ಹಾಗೂ ವೆಬ್ ವಿಳಾಸ http://locator.csccloud.in ಗಳಲ್ಲಿ ಪಡೆಯಬಹುದಾಗಿರುತ್ತದೆ.

ಫಲಾನುಭವಿಗಳು ತಮ್ಮೊಂದಿಗೆ ಆರಂಭಿಕ ವಂತಿಕೆ ಮೊತ್ತ, ಆಧಾರ್ ಕಾರ್ಡ್,  ಬ್ಯಾಂಕ್ ಖಾತೆ ಐ.ಎಫ್.ಎಸ್.ಸಿ ಕೋಡ್ ವಿವರಗಳೊಂದಿಗೆ (ಬ್ಯಾಂಕ್ ಪಾಸ್ ಪುಸ್ತಕ/ಚೆಕ್ ಪುಸ್ತಕ/ಬ್ಯಾಂಕ್ ಸ್ಟೇಟ್‍ಮೆಂಟ್) ತಮ್ಮ ನಾಮನಿರ್ದೇಶಿತರ ವಿವರಗಳು ಮತ್ತು ಮೊಬೈಲ್‍ನೊಂದಿಗೆ ಕಾಮನ್ ಸರ್ವಿಸ್ ಸೆಂಟರ್‍ಗಳಿಗೆ ತೆರಳುವುದು.

ಈ ಕೆಳಗಿನ ಪಟ್ಟಿಯಲ್ಲಿ ತಿಳಿಸಿರುವಂತೆ ವಯಸ್ಸಿಗೆ ಅನುಗುಣವಾಗಿ ಆರಂಭಿಕ ವಂತಿಗೆಯನ್ನು ನಗದು ರೂಪದಲ್ಲಿ ಪಾವತಿಸುವುದು ಹಾಗೂ ತದನಂತರ ಮಾಸಿಕ ವಂತಿಕೆಯನ್ನು ಅವರ ಖಾತೆಯಿಂದ ಆಟೋ-ಡೆಬಿಟ್ ಮೂಲಕ ಕಟಾವು ಮಾಡಿಕೊಳ್ಳಲಾಗುತ್ತದೆ.

 

ವ್ಯಾಪಾರಿಗಳು ಹಾಗೂ ಸ್ವಯಂ ಉದ್ಯೋಗಿಗಳಿಗೆ ರಾಷ್ಟ್ರೀಯ ಪಿಂಚಣಿ ಯೋಜನೆ ವಂತಿಕೆಯ ಚಾರ್ಟ್ ವಿವರಗಳು:

ಪ್ರವೇಶ ವಯಸ್ಸು

ವಯೋನಿವೃತ್ತಿಯ ವಯಸ್ಸು

ಸದಸ್ಯರ ಮಾಸಿಕ ವಂತಿಕೆ (ರೂಗಳಲ್ಲಿ)

 

ಕೇಂದ್ರ ಸರ್ಕಾರದ ಸಮಾನಾಂತರ ಮಾಸಿಕ ವಂತಿಕೆ (ರೂಗಳಲ್ಲಿ)

ಒಟ್ಟು ಮಾಸಿಕ ವಂತಿಕೆ

(1)

(2)

(3)

(4)

(5)

18

60

55

55

110

19

60

58

58

116

20

60

61

61

122

21

60

64

64

128

22

60

68

68

136

23

60

72

72

144

24

60

76

76

152

25

60

80

80

160

26

60

85

85

170

27

60

90

90

180

28

60

95

95

190

29

60

100

100

200

30

60

105

105

210

31

60

110

110

220

32

60

120

120

240

33

60

130

130

260

34

60

140

140

280

35

60

150

150

300

36

60

160

160

320

37

60

170

170

340

38

60

180

180

360

39

60

190

190

380

40

60

200

200

400

 

 

  1. ಯೋಜನೆಯ ಸೌಲಭ್ಯಗಳು

ಯೋಜನೆಯಡಿ ವಂತಿಕೆದಾರರು ಮಾಹೆಯಾನ ಪಾವತಿಸಬೇಕಾದ ವಂತಿಕೆಯನ್ನು, ಯೋಜನೆಯಡಿ ತೊಡಗಿಸಿಕೊಂಡ ಫಲಾನುಭವಿಯ ವಯಸ್ಸಿನ ಆಧಾರದ ಮೇಲೆ ನಿಗದಿಪಡಿಸಲಾಗಿದ್ದು, ಅಂತಹ ದರವು ಅತ್ಯಂತ ಕಡಿಮೆ ಇದ್ದು, ಕನಿಷ್ಠ ರೂ. 55 ಹಾಗೂ ಗರಿಷ್ಠ ರೂ. 200 ಆಗಿರುತ್ತದೆ.

ಕೇಂದ್ರ ಸರ್ಕಾರವು, ವಂತಿಕೆದಾರರು ಮಾಹೆಯಾನ ಪಾವತಿಸುವ ವಂತಿಕೆಗೆ ಸಮಾನಾಂತರ ವಂತಿಕೆಯನ್ನು ಅವರವರ ಪಿಂಚಣಿ ಖಾತೆಗೆ ಪಾವತಿಸುತ್ತದೆ.

60 ವರ್ಷ ಪೂರ್ಣಗೊಂಡ ನಂತರ ವಂತಿಕೆದಾರರು (ಫಲಾನುಭವಿಯು) ತಿಂಗಳಿಗೆ ನಿಶ್ಚಿತ ರೂ.3,000/-ಗಳ ಮಾಸಿಕ ಪಿಂಚಣಿಯನ್ನು ಪಡೆಯಲು ಅರ್ಹರಾಗುತ್ತಾರೆ.

ಫಲಾನುಭವಿಯು ನಿರಂತರವಾಗಿ ವಂತಿಕೆಯನ್ನು ಪಾವತಿಸಿದ್ದು ಅವರು 60 ವರ್ಷದ ಒಳಗಾಗಿ ಮೃತ ಪಟ್ಟಲ್ಲಿ ಅಥವಾ ಅಥವಾ ಶಾಶ್ವತ ಸಂಪೂರ್ಣ ದುರ್ಬಲತೆ ಹೊಂದಿವಂತಿಕೆಯನ್ನು ಪಾವತಿಸಲು ಸಾಧ್ಯವಾಗದಿದ್ದಲ್ಲಿ ಅವನ/ಅವಳ ಸಂಗಾತಿಯು ತದನಂತರವೂ ಯೋಜನೆಗೆ ಸೇರಬಹುದಾಗಿದ್ದು ವಂತಿಕೆಯನ್ನು ಪಾವತಿಸಿ ಮುಂದುವರಿಸಬಹುದಾಗಿರುತ್ತದೆ ಅಥವಾ ಅವರ ವಂತಿಕೆಯನ್ನು ಬಡ್ಡಿಯೊಂದಿಗೆ ಪಡೆಯಲು ಅರ್ಹರು.

ಪಿಂಚಣಿ ಆರಂಭಗೊಂಡ ನಂತರ ವಂತಿಕೆದಾರರು ಮೃತ ಪಟ್ಟಲ್ಲಿ, ಅವರ ಪತ್ನಿ/ಪತಿ ಪಿಂಚಣಿಯ ಶೇ.50 ರಷ್ಟು ಪಿಂಚಣೆಯನ್ನು ಪಡೆಯಲು ಅರ್ಹರು.

ವಂತಿಕೆದಾರರು ಯೋಜನೆಯಿಂದ 60 ವರ್ಷ ಪೂರ್ವದಲ್ಲೇ (ಮಧ್ಯದಿಂದಲೇ) ನಿರ್ಗಮಿಸಿದಲ್ಲಿ ಅವರು ಪಾವತಿಸಿರುವ ವಂತಿಕೆಯನ್ನು ಮಾತ್ರ ಬಡ್ಡಿಯೊಂದಿಗೆ ಹಿಂಪಡೆಯಲು ಅರ್ಹರಾಗಿರುತ್ತಾರೆ.

ಯೋಜನೆಯ ವಿದ್ಯುನ್ಮಾನ ಆಧಾರಿತವಾಗಿದ್ದು ಎಸ್.ಎಂ.ಎಸ್. ಮೂಲಕ ಎಲ್ಲಾ ವ್ಯವಹಾರಗಳ ಮಾಹಿತಿಯನ್ನು ಫಲಾನುಭವಿಗೆ ಕಾಲ ಕಾಲಕ್ಕೆ ತಿಳಿಸಲಾಗುವುದು.

                                               

  1. ನೋಂದಣಿ ಮಾಡುವ ಪ್ರಕ್ರಿಯೆಯ ವಿಧಾನಗಳು
  • ಫಲಾನುಭವಿಯು ಆಧಾರ್ ಸಂಖ್ಯೆ, ಮೊಬೈಲ್ ಹ್ಯಾಂಡ್ ಸೆಟ್, ಎಸ್.ಬಿ ಖಾತೆ ಹಾಗೂ ಆರಂಭಿಕ ವಂತಿಕೆಯೊಂದಿಗೆ ಸಿಎಸ್‍ಸಿ ಗೆ ತೆರಳುವುದು.
  • ಸಿಎಸ್‍ಸಿಯು ಓಟಿಪಿ ವಿಧಾನದ ಮೂಲಕ ವಿದ್ಯುನ್ಮಾನ ಮೂಲಕ ನೋಂದಾಯಿಸುವುದು.
  • ಸಿಎಸ್‍ಸಿಯು ವಯಸ್ಸಿನ ಆಧಾರದ ಮೇಲೆ ವಂತಿಕೆಯ ಮೊತ್ತವನ್ನು ಸ್ವಯಂ ಲೆಕ್ಕಾಚಾರ ಮಾಡುತ್ತದೆ.
  • ಫಲಾನುಭವಿಯು ವಂತಿಕೆಯ ಪ್ರಥಮ ಕಂತನ್ನು ನಗದು ರೂಪದಲ್ಲಿ ಪಾವತಿಸುವುದು.
  • ಯಶಸ್ವಿ ಹಣ ಪಾವತಿ ನಂತರ ಆನ್‍ಲೈನ್ ವ್ಯಾಪಾರಿ ಪಿಂಚಣಿ ಸಂಖ್ಯೆಯನ್ನು ನೀಡಲಾಗುತ್ತದೆ.
  • ಸ್ವೀಕೃತಿ ಮತ್ತು ಆಟೋ ಡೆಬಿಟ್ ಮ್ಯಾಂಡೆಟ್‍ಅನ್ನು ಫಲಾನುಭವಿಯ ಸಹಿಗೆ ನೀಡಲಾಗುತ್ತದೆ.
  • ಸಿಎಸ್‍ಸಿಯು ಸಹಿ ಮಾಡಿರುವ ಫಲಾನುಭವಿಯ ಡೆಬಿಟ್ ಮ್ಯಾಂಡೆಟ್‍ಅನ್ನು ಸ್ಕ್ಯಾನ್ ಮಾಡಿ ಅಪ್‍ಲೋಡ್‍ಮಾಡುತ್ತಾರೆ.
  • ಸಿಎಸ್‍ಸಿಯ ವ್ಯಾಪಾರಿ ಕಾರ್ಡ್ ಅನ್ನು ಪ್ರಿಂಟ್ ಮಾಡಿ ಫಲಾನುಭವಿಗೆ ನೀಡುತ್ತಾರೆ.
  • ಬ್ಯಾಂಕಿನಿಂದ ದೃಢೀಕರಣ ಬಂದ ನಂತರ ಡೆಬಿಟ್ ಮ್ಯಾಂಡೇಟ್ ಅನ್ನು ಆಕ್ಟಿವೇಟ್ ಮಾಡಲಾಗುತ್ತದೆ ಮತ್ತು ಎಸ್‍ಎಂಎಸ್ ಮೂಲಕ ಫಲಾನುಭವಿಗೆ ಮಾಹಿತಿ ನೀಡಲಾಗುತ್ತದೆ.

 

 

ಇತ್ತೀಚಿನ ನವೀಕರಣ​ : 31-01-2020 12:02 PM ಅನುಮೋದಕರು: Approver Ksuwssb



ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080